Kaanada Kadalige Hambaliside Mana

500.00 INR399.00 INR

Availability
Pre-Order
FIND YOUR SIZE

Check Out

Kaanada Kadalige   ಸಾಗರದ ಅಡಿಯಿಂದ ಮೇಲೆದ್ದು ಚಿಮ್ಮುತ್ತಿರುವ ಆ ಎರಡು ಮೀನುಗಳನ್ನು ನೋಡಿ.. ಆ ಮೀನುಗಳ ಕಣ್ಣುಗಳನ್ನೇ ನೋಡಿ.. ಯಾವುದೋ ಭ್ರಮೆಯಲ್ಲಿ ಹೊಸ ಕಡಲನ್ನು ಹುಡುಕುತ್ತಾ ಆರ್ತವಾಗಿ ಮುಖ ಮಾಡಿದಂತಿಲ್ಲವೇ? ಆ ಬಾಯ್ತೆರೆದ ಮುಖದಲ್ಲಿ ಅರಸುವ ಭಾವವಿಲ್ಲವೇ? ಅದೇ ಅಲ್ಲವೇ ಕಾಣದ ಕಡಲಿಗೆ ಹಂಬಲಿಸುವ ಮನ?     ಮನಸೆಂಬ ಜಾಡಿಯಲ್ಲಿ ಸುಪ್ತ ಸಾಗರವನ್ನೇ ತುಂಬಿಕೊಂಡು ಬೇರೊಂದು ಕಡಲಿನ ಕನಸನರಸುವ ಮನ.. ದೂರ ತೀರದಲ್ಲೆಲ್ಲೋ ಕಾಣುವ ಉಸುಕಿನಲ್ಲಿ ಹೆಜ್ಜೆ ಮೂಡಿಸುವ ಕಾತುರದಲ್ಲಿ ಬೀಸುವ ಗಾಳಿಗೆ ವಿರುದ್ಧವಾಗಿ ಹೊಯ್ದಾಡುವ ಮನ..ಜಟಿಲ ಕಾನನದ ಕುಟಿಲ ಪಥಗಳಲಿ ಹರಿವ ತೊರೆಯ ಮನ ಎಂದಿಗೂ ಹಂಬಲಿಸುವುದು ಕಾಣದ ಕಡಲನ್ನೇ..      ರಾಷ್ಟ್ರಕವಿ ಜಿ ಎಸ್ ಶಿವರುದ್ರಪ್ಪನವರ ಕವಿ ಮನಸ್ಸಿಗೆ ಶಾಂತಿ ಸಿಗಲಿ ಎಂಬ ನಿತ್ಯ ಹಾರೈಕೆಯೊಂದಿಗೆ Aziteez ಅವರ ಸಾಲುಗಳ ಅಂಗಿಯನ್ನು ಪ್ರಸ್ತುತಪಡಿಸುತ್ತಿದೆ 

Related Products

Facebook