Namma Bhadravathi

Namma Bhadravathi

450.00 INR399.00 INR

Availability
Pre-Order
FIND YOUR SIZE

Check Out

ಕರ್ನಾಟಕದ ಉಕ್ಕಿನ ನಗರ'ವೆಂದು ಕರೆಯಲ್ಪಡುವ ಭದ್ರಾವತಿಯ ಹೆಸರು , ಅದರ ಮೂಲಕ ಹರಿಯುವ ಭದ್ರಾ ನದಿಯಿಂದ ಉತ್ಪನ್ನವಾಗಿದೆ. ಹಿಂದೆ ಬೆಂಕಿಪುರ (ಅಥವಾ ವಂಕಿಪುರ/ವೆಂಕಿಪುರ) ಎಂದು ಕರೆಯಲ್ಪಟ್ಟಿತ್ತು. ಇತ್ತೀಚಿನ ಚರಿತ್ರೆಯಲ್ಲಿ ಭದ್ರಾವತಿಯು ೧೯೧೮ರಲ್ಲಿ ಸ್ಥಾಪಿಸಲಾದ ಮೈಸೂರು ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯಿಂದ ಹೆಸರಾಯಿತು. ಅನಂತರ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ಎಂದು ನಾಮಕರಣಗೊಂಡ ಇದು ಒಂದು ದೊಡ್ಡ ಕಬ್ಬಿಣ ಮತ್ತು ಉಕ್ಕು ಉತ್ಪಾದಿಸುವ ಸೌಕರ್ಯ ಹೊಂದಿದ್ದು ಭದ್ರಾವತಿಯ ಮುಖ್ಯ ಭಾಗವಾಗಿದೆ. ಕಾರ್ಖಾನೆಗಳ ಪಟ್ಟಣ ಎಂಬ ಪ್ರಖ್ಯಾತಿಯನ್ನು ಹೆಚ್ಚಿಸಿದ್ದು ೧೯೩೬ರಲ್ಲಿ ಸ್ಥಾಪಿಸಲಾದ ಮೈಸೂರು ಕಾಗದ ಕಾರ್ಖಾನೆ.   ಪೂಜಿತ ದೇವರ ಸುಂದರ ಮೂರ್ತಿಗಳನ್ನು ನೋಡಬೇಕಾದರೆ ಭದ್ರಾವತಿಯ ಲಕ್ಷ್ಮೀನರಸಿಂಹ ದೇವಾಲಯಕ್ಕೆ ಭೇಟಿ ನೀಡಬೇಕು. ಇಲ್ಲಿ ಅದ್ಭುತವಾಗಿ ಕೆತ್ತಲಾಗಿರುವ ೫ ಮೂರ್ತಿಗಳಿವೆ - ಲಕ್ಷ್ಮೀನರಸಿಂಹ, ವೇಣುಗೋಪಾಲ, ಪುರುಷೋತ್ತಮ, ಗಣೇಶ ಮತ್ತು ಶಾರದಾ. ಈ ಮೂರ್ತಿಗಳನ್ನು ಕೆತ್ತಿದ ಶಿಲ್ಪಿ ಡಕ್ಕಣಾಚಾರಿ. ಚಿಕ್ಕಮಗಳೂರು ಜಿಲ್ಲೆಯ ಕುದುರೆಮುಖದ ಬಳಿ ಸಹ್ಯಾದ್ರಿಯ ಒಡಲಲ್ಲಿ ತನ್ನ ಉಗಮಸ್ಥಾನ ಹೊಂದಿರುವ ಭದ್ರಾನದಿಯು ಉತ್ತರಾಭಿಮುಖವಾಗಿ ಹರಿದು ಭದ್ರಾವತಿ ನಗರವನ್ನು ದಕ್ಷಿಣ ದಿಕ್ಕಿನಿಂದ ಪ್ರವೇಶಿಸುತ್ತದೆ. ಹೀಗೆ ಪ್ರವೇಶಿಸುವಾಗ, ಉತ್ತರ ದಿಕ್ಕಿನಿಂದ ಪಶ್ಚಿಮ ದಿಕ್ಕಿಗೆ ಎಡಕ್ಕೆ ತಿರುಗಿ ಪಶ್ಚಿಮ ವಾಹಿನಿಯಾಗುತದೆ. ಉತ್ತರ ದಿಕ್ಕಿನಿಂದ ಪಶ್ಛಿಮ ದಿಕ್ಕಿಗೆ ತಿರುಗುವ ಈ ತಿರುವಿಗೆ ಚಕ್ರತೀರ್ಥ ಎನ್ನುತ್ತಾರೆ. ಈ ಚಕ್ರತೀರ್ಥದ ಬಳಿ ಪುರಾಣ ಪ್ರಸಿದ್ಧ ವಂಕೀ ಮಹರ್ಷಿಗಳ ಆಶ್ರಮವಿತ್ತಂತೆ. ಈ ವಂಕೀ ಮಹರ್ಷಿಗಳು ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿಯನ್ನು ಕುರಿತು ತಪಸ್ಸನ್ನಾಚರಿಸುತ್ತಾರೆ. ಸ್ವಾಮಿಯು ಈ ಋಷಿಗಳಿಗೆ ದರ್ಶನವಿತ್ತು, "ಪಶ್ಚಿಮವಾಹಿನಿಯಾದ ಭದ್ರೆಯ ಯಾವ ಪವಿತ್ರ ಕ್ಷೇತ್ರದಲ್ಲಿ ನೀನು ತಪವನ್ನಾಚರಿಸಿದೆಯೋ ಆ ಕ್ಷೇತ್ರದಲ್ಲಿ ನಾನು ಸ್ಥಿರವಾಗಿ ನೆಲೆಸಿ ಭಕ್ತರ ಅಭೀಷ್ಟೆಗಳನ್ನು ಈಡೇರಿಸುವನು" ಎಂದು ಹೇಳಿದನೆಂದು ಪ್ರತೀತಿ. ಮುಂದೆ ಹದಿಮೂರನೇ ಶತಮಾನದಲ್ಲಿ ಹೊಯ್ಸಳರ ವೀರನಸಿಂಹನು (ವಿಷ್ಣುವರ್ಧನನ ಮೊಮ್ಮಗ ಮತ್ತು ಎರಡನೇ ಬಲ್ಲಾಳನ ಮಗ) ವಂಕೀ ಮಹರ್ಷಿ ಮತ್ತು ಲಕ್ಷ್ಮೀನರಸಿಂಹ ಸ್ಥಳ ಪುರಾಣವಿದ್ದ ಈ ಪ್ರದೇಶದಲ್ಲಿ ಭವ್ಯವಾದ ಲಕ್ಷ್ಮೀನರಸಿಂಹ ದೇವಾಲಯವನ್ನು ಹೊಯ್ಸಳ ಶಿಲ್ಪಕಲಾ ಮಾದರಿಯಲ್ಲಿ ಕಟ್ಟಿಸಿ ಕ್ರಿ.ಶ. ೧೨೨೪ ನೇ ಇಸವಿಯ ವ್ಯಯನಾಮ ಸಂವತ್ಸರದ ದ್ವಿತೀಯ ಶುದ್ಧ ತ್ರಯೋದಶಿಯಂದು ಲೋಕಾರ್ಪಣೆ ಮಾಡಿದನು. ಇಂದಿಗೂ ಈ ದೇವಾಲಯ ಭದ್ರಾವತಿಯ ಹಳೇನಗರದಲ್ಲಿದ್ದು ಭಾರತೀಯ ಪುರಾತತ್ವ ಇಲಾಖೆಯ ವ್ಯಾಪ್ತಿಯಲ್ಲಿ ಐತಿಹಾಸಿಕ ಸ್ಮಾರಕವೆಂದು ಘೋಷಿಸಲ್ಪಟ್ಟಿದೆ. ಈ ಊರಿಗೆ ವಂಕೀಪುರ ಎಂಬ ಹೆಸರು ಇತ್ತೆಂಬುದಕ್ಕೆ ಇಂಬು ಕೊಡುವಂತೆ, ಶ್ರೀಲಕ್ಷ್ಮೀನರಸಿಂಹನ ಬಗ್ಗೆ ಒಂದು ಶ್ಲೋಕವಿದೆ. ಅದೆಂದರೆ "ಮಂಗಲಂ ಸ್ತಂಭ ಡಿಂಭಾಯ, ಮಂಗಲಂ ಮೃತ್ಯು ಮೃತ್ಯವೇ, ವಂಕೀಪುರ ನಿವಾಸಾಯ, ನರಸಿಂಹಾಯ ಮಂಗಲಂ" ಎಂದು. ಈ ಶ್ಲೋಕವನ್ನು ಇಂದಿಗೂ ದೇವಾಲಯ ದ್ವಾರದಲ್ಲಿ ಕಾಣಬಹುದು. ಹದಿನಾಲ್ಕನೇ ಶತಮಾನದಿಂದೀಚೆಗೆ ಈ ಊರಿಗೆ ಲಕ್ಷ್ಮೀಪುರ, ಲಕ್ಷ್ಮೀನರಸಿಂಹಪುರ, ಭದ್ರಾಪುರ ಇನ್ನೂ ಮುಂತಾದ ಹೆಸರುಗಳಿದ್ದವೆಂಬುದಕ್ಕೆ ಸಾಕಷ್ಟು ಪುರಾವೆಗಳಿವೆ. ಇಷ್ಟೆಲ್ಲಾ ಹೆಸರುಗಳಿದ್ದೂ ವಂಕೀಪುರವೆಂಬ ಹೆಸರೇ ರೂಢಿಯಲ್ಲಿ ಉಳಿದುಕೊಂಡು ಕಾಲಕ್ರಮೇಣ ಜನರ ಬಾಯಲ್ಲಿ ಅದು ಬೆಂಕಿಪುರವಾದದ್ದು, ತದನಂತರ ನಾಲ್ವಡಿ ಕೃಷ್ಣರಾಜ ಒಡೆಯರ್ ಆಳ್ವಿಕೆಯ ಕಾಲದಲ್ಲಿ ಭದ್ರಾವತಿ ಎಂದು ಮರುನಾಮಕರಣಗೊಂಡಿತು. ವಿನ್ಯಾಸ ಕೃಪೆ : Raghu.CPRS   Facebook:https://www.facebook.com/groups/nammabhadravathi/

  • Namma Bhadravathi

Related Products

Facebook