Kannada Rajyotsava 2014

ಮತ್ತೊಂದು ವರ್ಷ ಕಳೆದಿದೆ. Aziteez ಮೂರು ವರ್ಷದ ಸಂಭ್ರಮದಲ್ಲಿ ಮತ್ತೊಂದು ರಾಜ್ಯೋತ್ಸವವನ್ನು ಆಚರಿಸಲು ಸಿದ್ಧವಾಗಿದೆ. ವರ್ಷಪೂರ್ತಿ ಕಾಯುತ್ತಿರುವವ್ರಿಗೆ ಹೊಸ ವಿನ್ಯಾಸಗಳೊಂದಿಗೆ ಹೊಸ ವಿಧದ ಚಿತ್ತಾರದೊಂದಿಗೆ ನಾವು, ನಿಮ್ಮ ಜೊತೆ.

 ಅನಂತಮೂರ್ತಿ, ಜಿಎಸ್ಸೆಸ್ ಗಳಂತಹ ಮೂಲಧಾತುಗಳು ನಮ್ಮನ್ನಗಲಿ ವರ್ಷವಾಗಿಲ್ಲ. ಅವರಳಿದರೂ ಅವರುಳಿಯುತ್ತಾರೆ, ಹೊಸ ಪರಂಪರೆಯ ನಾವು ಅವರನ್ನುಳಿಸುತ್ತೇವೆ. ಕನ್ನಡ ಕರುನಾಡಿನ ಸಂಸ್ಕೃತಿ ಅನನ್ಯ. ಹಳೆ ನೀರು ಹರಿಯುತ್ತಿದ್ದಂತೆ, ಹೊಸ ನೀರು ಬಂದೇ ಬರುತ್ತದೆ, ಈ ಕನ್ನಡವೆಂಬ ನಿರಂತರ ಚಿಲುಮೆಯಲ್ಲಿ. ಪಂಪ, ಕುಮಾರವ್ಯಾಸ, ರನ್ನ ಜನ್ನರಾದರು. ಅಡಿಗ, ಮಾಸ್ತಿ, ಕುವೆಂಪು ಮೆರೆದರು. ಯುವಪೀಳಿಗೆ ಗಟ್ಟಿಯಿದೆ. ಹಳೆಯ ಬೇರಿನ ಉಸಿರಿರುವವರೆಗೂ ಚಿಗುರುತ್ತಲೇ ಇರುತ್ತದೆ ಈ ಕನ್ನಡ..

ಪಂಪರನ್ನರ್ ಕುಮಾರವ್ಯಾಸ ಲಕ್ಷ್ಮೀಶ ಹರಿಹರಾದಿಗಳುಸಿರ್ ನಮ್ಮೊಳಿರ್ಪನ್ನೆಗಂ
ಅಳಿಯದೀ ಕನ್ನಡಂ ಅಳುಕದೀ ಕನ್ನಡಂ ಉಳಿವುದೀ ಕನ್ನಡಂ

ಹೀಗೆ ಘೋಷಿಸಿದ್ದ ಕವಿ ಕುವೆಂಪುರವರ ವಾಣಿ ನಮ್ಮ ಅಂಗಿಯ ಮೇಲಿಂದು ನಲಿಯಲಿ..!!

 ಅಖಂಡ ಕರ್ನಾಟಕದಲ್ಲಿ ಎಲ್ಲರೂ ಕನ್ನಡಿಗರು. ವಿಶ್ವ ಸಂಸ್ಕಾರದ ಇಲ್ಲಿಯ ಜನ ನೀರು ಕೇಳಿದರೆ ಪಾನಕ ಕೊಡುವವರು. ಬೆಳೆಸುತ್ತ ಬೆಳೆಯುವ ಎಲ್ಲರೂ ಕನ್ನಡಿಗರು. ನಮ್ಮ ನಡೆ ಕನ್ನಡ.. ನುಡಿ ಕನ್ನಡ.. ತನು ಕನ್ನಡ ಮನ ಕನ್ನಡ.. ನಮ್ಮೆಲ್ಲರ ನಿದ್ರೆಯಲ್ಲಿ ಬೀಳುವ ಕನಸು ಕನ್ನಡದ್ದು.. ಕನ್ನಡದಲ್ಲಿ ಕನಸು ಕಾಣುವ ನಾವೆಲ್ಲರೂ ಕನ್ನಡಿಗರು. ಇನ್ಯಾಕೆ ತಡ? ಕನ್ನಡವನ್ನು ರಾರಾಜಿಸಲು ಇಂದೇ ಕನ್ನಡದಂಗಿಯ ಧರಿಸಿ.www.aziteez.com ಪ್ರಸ್ತುತ ಪಡಿಸಿರುವ ಈ ವರ್ಷದ ರಾಜ್ಯೋತ್ಸವ ಅಂಗಿಗಳನ್ನು ಪ್ರೋತ್ಸಾಹಿಸಿ. ನಮ್ಮ ನಿತ್ಯ ವ್ಯವಹಾರದಲ್ಲಿ ಕನ್ನಡ ಪಾಲ್ಗೊಳ್ಳಲಿ.. ನಿಮಗೆಲ್ಲ ಕನ್ನಡದ ಕನಸೇ ಬೀಳಲಿ.

 

Displaying 1 - 2 of 2