Kannada Rajyotsava 2015
ವರ್ಷ ನಾಲ್ಕು.
ಹೊಸ ವರ್ಷ, ಹೊಸ ಉತ್ಸವ, ಹೊಸ ಬಣ್ಣ, ಹೊಸ ವಿನ್ಯಾಸ, ಹೊಸ ವಿಚಾರ, ಹೊಸ ಧ್ಯೇಯ, ಹೊಸ ಅಂಗಿ..!! ಈ ವರ್ಷದ ರಾಜ್ಯೋತ್ಸವದಲ್ಲಿ ಪ್ರತಿವರ್ಷದಂತೆ ನಮ್ಮ ಜೊತೆ ಸಂಭ್ರಮಿಸುತ್ತೀರೆಂಬ ನಿತ್ಯ ಭರವಸೆಯೊಂದಿಗೆ ಮತ್ತೆ ಬಂದಿದ್ದೇವೆ, ನಾಲ್ಕು ವಿನ್ಯಾಸಗಳೊಂದಿಗೆ. ನಾಲ್ಕರಲ್ಲಿ ಕೆಲವು ಮೈ ಚಳಿಗಾದರೆ, ಕೆಲವು ಕಣ್ ತಂಪಿಗೆ.
ಬೇಕಾದ್ದೆಲ್ಲಾ ಸಿಗುವ ದೇವಲೋಕದ ಕಲ್ಪನೆಗಳೆಲ್ಲಾ ನಮಗೆ ಹೊಸದಲ್ಲ. ಅದೇ ರೀತಿ ತಾಯ್ನೆಲ ಈ ಸ್ವರ್ಗಕ್ಕಿಂತಲೂ ಮಿಗಿಲೆಂಬ ವಿಚಾರವೂ ಹೊಸದಲ್ಲ. ಹೀಗಾಗಿ ನಮ್ಮೀ ತಾಯ್ನೆಲ ಕರ್ನಾಟಕವನ್ನು ದೇವಲೋಕದ ಕಲ್ಪವೃಕ್ಷ ಕಾಮಧೇನುಗಳ ಸಾಲಲ್ಲಿ ನಿಲ್ಲಿಸಿದರೆ ತಪ್ಪೇನು? ಕರ್ನಾಟಕದಲ್ಲೇನಿಲ್ಲ?
ಆದರೆ ಪ್ರಸ್ತುತ ಪ್ರಶ್ನೆಯನ್ನು ಸಲ್ಪ ಬದಲಿಸೋಣ.. ಕರ್ನಾಟಕ ಎಲ್ಲಿದೆ? ಎಂದು ಕೇಳೋಣ. ಬೆಂಗಳೂರಿನ ವೋಲ್ವೋ ಬಸ್ಸಿನ ಎ.ಸಿ. ಡಕ್ಟುಗಳಲ್ಲಿರುವುದು ಕರ್ನಾಟಕವೇ ? ಮೈಸೂರಿನ ಅರಮನೆಯ ಛಾವಣಿಯ ಉದುರುತ್ತಿರುವ ಬಣ್ಣದಲ್ಲಿರುವುದು ಕರ್ನಾಟಕವೇ? ಮಲೆನಾಡಿನ ಅಡಿಕೆ ಮರಗಳ ಸಿಂಗಾರದಲ್ಲಿರುವುದು ಕರ್ನಾಟಕವೇ ? ಹುಬ್ಬಳ್ಳಿಯ ಚೆನ್ನಮ್ಮನ ಕತ್ತಿಂಛಿಗೆ ಕೂತ ಧೂಳಲ್ಲಿರುವುದು ಕರ್ನಾಟಕವೇ? ಗುಲಬರ್ಗದ ತೊಗರಿ ಬೇಳೆಗಳ ಚೀಲಗಳಲ್ಲಿರುವುದು ಕರ್ನಾಟಕವೇ? ಹೃದಯದ ಜನರ ನರ ನಾಡಿಗಳಲ್ಲಿ ಹರಿಯುವ ರಕ್ತದ ಕಣ ಕಣಗಳಲ್ಲಿಿರುವ ಜೀವಾಂಶಗಳಲ್ಲಿ ಕರ್ನಾಟಕವಿಲ್ಲವೇ? ಸಾಮಾನ್ಯಾತಿ ಸಾಮಾನ್ಯಗಳಿಂದ ಹಿಡಿದು ಮಾನ್ಯಾತಿ ಮಾನ್ಯಗಳಲ್ಲಿರುವುದು ಕರ್ನಾಟಕ. ಇದು ಹಲವು ಜಗತ್ತು. ಕನ್ನಡ-ಕರ್ನಾಟಕಗಳು ಕೇವಲ ಜಿಲ್ಲೆ-ರಾಜ್ಯಗಳ ಗಡಿಯಿಂದಾವೃತವಾದವಲ್ಲ. ಎಲ್ಲವೂ ಸಿಗುವ, ಎಲ್ಲಿಯೂ ಸಿಗುವ, ಎಲ್ಲರಲ್ಲೂ ಇರುವ, ಆದರೆ ಎಲ್ಲೆ ಮೀರಿದ ಜಗತ್ತು ಕರ್ನಾಟಕ. ಇದು ಕಲ್ಪವೃಕ್ಷ-ಕಾಮಧೇನು.
ಸಂಭ್ರಮದಲ್ಲಿ ನಾಲ್ಕು ವಿನ್ಯಾಸಗಳಿವೆ. ಬೇಂದ್ರೆಯವರ ಕೆಲ ಸಾಲುಗಳನ್ನು ಅಂಗಿಯ ಹಿಂಬದಿಗೆ ವಿನ್ಯಾಸಗೊಳಿಸಿದ್ದೇವೆ. ಮಲೆನಾಡಿನ ಹಸೆ-ಚಿತ್ರವನ್ನು ಅಂಗಿಯ ಮೇಲೆ ಹಾಕುವ ಮೂಲಕ ಒಂದು ಕನ್ನಡ-ಕರ್ನಾಟಕ ಜನಪದವನ್ನು ಸಾರ್ವತ್ರಿಕಗೊಳಿಸುವ ಪ್ರಯತ್ನ ಮಾಡಿದ್ದೇವೆ. ಕನ್ನಡ ಕರ್ನಾಟಕದಿಂದ ಜಗದೇಳಿಗೆಯಾಗುವುದಿದೆ, ಖಂಡಿತ. ಆದರೆ ಕರ್ನಾಟಕದ ಹಿತ ವಿಹಿತಗಳೇನಿದ್ದರೂ ಅದು ಕನ್ನಡ ಕುಲದಿಂದ ಮಾತ್ರ ಸಾಧ್ಯ. ಈ ನಾಲ್ಕು ವರ್ಷದ ಹಾದಿ ಈ ಕನ್ನಡ ಕುಲದ್ದೇ ಸಾಧನೆ. ನಿಮಗೆ ಅಭಿನಂದನೆಗಳು.
Bulk Orders :
Sudhi : 9964028466
Gokul : 9739991159